ಭಾವ ಯಾನ

ಭಾವ ಯಾನ

ಹಿಂದೂ ಪುರಾಣಗಳ ಸುತ್ತ

  • Latest
  • Popular
  • Video
#ಪುರಾಣ	 #jaishreekrishna

#jaishreekrishna ಪುರಾಣಗಳ ಪ್ರಕಾರ ಕೃಷ್ಣನಗರಿ ಉಡುಪಿಗೆ ..ಉಡುಪಿ ಎಂಬ ಹೆಸರು ಹೇಗೆ ಬಂದಿರಬಹುದು

72 View

#ಸಮಾಜ್

126 View

#ಕಾವ್ಯ

ನಾನು ಎಲ್ಲರಿಗೂ ಅಲ್ಲ, ನನ್ನ ಸತ್ಯ ನನಗೆ ತಿಳಿದಿದೆ, ನಾನು ಯಾರೆಂದು ನನಗೆ ತಿಳಿದಿದೆ, ನಾನು ಏನು ಮಾಡುತ್ತೇನೆ ಎನ್ನೂವುದು ಕೂಡ... ನಾನು ಎಲ್ಲರಿಗೂ ಅಲ್ಲ, ಶ್ರೀಮಂತಿಕೆಗೆ ಬೆಲೆ ಕೊಡುವವರಿಗೆ ನಾನಲ್ಲ ಸಾಧಿಸಿದವರ ಸುತ್ತ ಮಾತ್ರ ನಿಲ್ಲುವವರಿಗೆ ನಾನಲ್ಲ

99 View

#ಕಾವ್ಯ #sad_shayari  White  ದೇವಲೋಕದಲ್ಲೊಂದು
ಸೌಂದರ್ಯ ಸ್ಪರ್ಧೆ...
ರಂಬೆ,ಊರ್ವಶಿ, 
ಮೇನಕೆಯರಾದಿಯಾಗಿ
ಎಲ್ಲರೂ ಸ್ಪರ್ಧಿಗಳೆ...
ಮೂರು ಲೋಕದ
ಸುಂದರಿಯರ ನಡುವೆ
ಭೂ ಲೋಕದಿಂದ
ನನ್ನವಳ ನಡಿಗೆ.....
ಗೆಲ್ಲುವವಳು ನನ್ನವಳೆ
ಗೊತ್ತೆನೆಗೆ....!!

ಇಂದ್ರನ ದೃಷ್ಟಿ ತಾಗಿದರೆ
ಎನ್ನುವ ಭಯ ನನಗೆ !!

©ಒಂಟಿ ಪಯಣಿಗ

#sad_shayari

54 View

#ಕಾವ್ಯ #milan_night  White   ಸಿಟ್ಟೈತಿ ಕೊರವಂಜಿ ಎನಗ
 ಸಿಟ್ಟೈತಿ ತಾಯಿ ನಿನಮ್ಯಾಗ....
 ನೀ ಹೇಳಿದ ಮಾತೊಂದು
 ನಿಜವಾಗಲಿಲ್ಲ ನನ್ನವ್ವಾ ....
 ಊರಿಗೆ ಅರಸನಾಗುತ್ತಿ ಎಂದು
 ಕಿವಿಯಲ್ಲೆ ಉಸುರಿದಿಯಲ್ಲಾ
 ಕೊನೆಗೆ,ದಿಗ್ಪಾಲಕನು ಆಗಲಿಲ್ಲ ನಾನು!!
 ಸಿಟ್ಟೈತಿ ಕೊರವಂಜಿ ನಿನಮ್ಯಾಗ,
 ಚಿಂತಿ ಮಾಡಬ್ಯಾಡೋ ತಮ್ಮಾ...
 ನೀ ಮುಟ್ಟಿದ್ದೆಲ್ಲ ಚಿನ್ನವಾಗೊ
 ಕಾಲ ಹತ್ತಿರ ಬಂದೈತಿ ನೋಡ್...
 ಎಂದು ಜೋರು ಧ್ವನಿಯಾಗ 
 ಮಾರವ್ವನ್ ಸಾಕ್ಷಿ ಹಾಕಿ
 ನುಡಿದಿಯಲ್ಲಾ ತಾಯಿ......
  ನಾ ಚಿನ್ನವ ಮುಟ್ಟಿದರೆ
 ಅದು ಬಣ್ಣ ಗೆಡ್ತೈತಿ ನೋಡವ್ವ...
 ಸಿಟ್ಟೈತಿ ಕೊರವಂಜಿ ನಿನ್ನ ಮ್ಯಾಗ 
 ನೀ ನುಡಿದದ್ದು  ನಿಜವಾಗುವುದು ಯಾವಾಗ? ?

©ಒಂಟಿ ಪಯಣಿಗ

#milan_night

99 View

#ಕಾವ್ಯ #Sad_shayri  White  ಹುಡುಗಿಯರೆ ತೀರಾ ಚೌಕಾಸಿ ಬೇಡ
ಹೃದಯದಂಗಡಿಯ ತೆರೆದು ಬಿಡಿ,

ಪ್ರತಿದಿನ ನಿಮ್ಮ ಚಂದ್ರನಂತಹ ಮುಖ ನೋಡಲು ಸಿಕ್ಕರೆ...
ಉಪವಾಸ ಮಾಡುವ ಹುಡುಗರಿಗೆ ದಿನವು ಸಂಕಷ್ಟಹರ ಚತುರ್ಥಿ 

ನಾವು ಹುಡುಗರು, ದೀಪಗಳನ್ನು ಬೆಳಗಿಸಲು ಇಷ್ಟಪಡುತ್ತೇವೆ
ಆದರೆ ನೀವು ಬಿರುಗಾಳಿ ಇದ್ದಂತೆ,ಹಚ್ಚಿದ ದೀಪವ  ನಂದಿಸಿ ಬಿಡುವಿರಿ

ನೀವು ಒಮ್ಮೆ ನಮ್ಮ ಕಡೆ
ನೋಡಿದರೆ...
ನಾವು ಪ್ರತಿ ಸಂಜೆ ಟೆರೇಸ್ ಮೇಲೆ ಬರಲು ತಯಾರಿರುವೆವು...

ನಾವು ಸಿಗರೇಟ್ ಸೇದುವುದು
ನಮ್ಮ ಚಟಕ್ಕಾಗಿ ಅಲ್ಲ
ಗಾಳಿಯಲ್ಲಿ ಲೀನವಾಗುವ
ಅದರ ಹೊಗೆಯಲ್ಲಿ ನಿಮ್ಮ
ರೂಪವ ನೋಡಲು...

ಹುಡುಗಿಯರೆ, 
ಹೃದಯದಂಗಡಿಯ ತೆರೆದುಬಿಡಿ
ತೀರಾ ಚೌಕಾಸಿ ಬೇಡ...

©ಒಂಟಿ ಪಯಣಿಗ

#Sad_shayri

63 View

Trending Topic