callmeShravan

callmeShravan

  • Latest
  • Popular
  • Video
#ಕಾವ್ಯ #mohabbat  ಈಗಷ್ಟೇ ಪರಿಚಯವಾದ ನಿನ್ನನು ಗೆಳತಿ ಎನ್ನಲೆ
ಮೊದಲ ನೋಟದಲ್ಲೇ ಪ್ರೀತಿಯಾಗಿದ್ದಕ್ಕೆ ಪ್ರೇಯಸಿ ಎನ್ನಲೆ


ಏನೆನ್ನಲಿ ಹುಡುಗಿ

ಕೋಪ ಮಾಡಿಕೊಂಡು ದೂರ ಹೋಗಿದ್ದಕ್ಕೆ ದುರಹಂಕಾರಿ ಎನ್ನಲೆ
ಅರ್ಧ ತಾಸಿನ ನಂತರ ಬಂದು ಅಪ್ಪಿಕೊಂಡಿದ್ದಕ್ಕೆ ಅಪ್ಸರೆ ಎನ್ನಲೆ

ಏನೆನ್ನಲಿ ಹುಡುಗಿ

ಜೀನ್ಸ್ ಪ್ಯಾಂಟು , ಟೀ ಶರ್ಟ್ ತೊಟ್ಟಿದ್ದಕ್ಕೆ ಮಾರ್ಡನ್ ಹುಡುಗಿ ಎನ್ನಲೆ
ಊರಿನ ಜಾತ್ರೆಯ ದಿವಸ ಸೀರೆ ಉಟ್ಟಿದ್ದಕ್ಕೆ ಧರೆಯ ದೇವತೆ ಎನ್ನಲೆ

ಏನೆನ್ನಲಿ ಹುಡುಗಿ.



_ಶ್ರವಣ_writingS

©callmeShravan

#mohabbat

90 View

#ಕಾವ್ಯ #poetic #you  ನಿನ್ನ ಕಾಲ್ಗೆಜ್ಜೆಯ ಸಪ್ಪಳ ಕೇಳಿದಾಕ್ಷಣವೇ
ನನ್ನೆದೆಯಲಿ ನೂರು ಅನುರಾಗ ಕಂಪನಗಳು

ನಿಶ್ಶಬ್ದವಾಗಿದ್ದ ಉಸಿರಾಟದಲ್ಲೀಗ ನವಿರಾದ ಉದ್ವೇಗದೋಟ

ನಿನ್ನ ಬರುವಿಕೆಗಾಗಿ ಕಾದು ಸೋತ
ನಿಸ್ತೇಜ ಕಣ್ಣುಗಳಲ್ಲೀಗ ನಿರಾಂತಕದ ಶುಭ್ರ ಮೋಡ

ನಿನ್ನ ಕೈ ಸೋಕದೆ ಹೊಳಪು ಕಳೆದುಕೊಂಡ 
ಕವಿತೆಯ ಸಾಲುಗಳಲ್ಲೀಗ 
ಸಿಂಗಾರಗೊಂಡ ನವವಧುವಿನ ಚೆಲುವು

ನಿನ್ನ ಮೊಗವಿನ್ನು ಕಾಣದೆ ನಿನ್ನ ಕಾಲ್ಗೆಜ್ಜೆಯ ನಿನಾದದಲ್ಲೇ
ಇದು ನೀನೇ ಎಂದು ಮನದೊಳಗೆ ಮುದ್ರೆ ಮೂಡಿಯಾಗಿದೆ

ನಿನ್ನ ಕಾಲ್ಗೆಜ್ಜೆಯ ದನಿಯಿಂದಲೆ ಇಷ್ಟು ಚೇತರಿಕೆ ಕಂಡಿರುವಾಗ
ಇನ್ನು ಆ ನಿನ್ನ ದಿವ್ಯವಾದ ಸ್ವರ ಮಾಧುರ್ಯ,
ಭವ್ಯವಾದ ಸೌಂದರ್ಯದ ದರುಶನದಲಿ 
ಅದಿನ್ನೆಂಥ ಚೇತರಿಕೆ, ಚೆಲುವಿಹುದೊ!


_ಶ್ರವಣ

©callmeShravan

#love#you#poetic

90 View

#Motivational  ದರ್ದೆನಿತ್ತು ದರ್ದೆನಿತ್ತು
ಮಾತಿಗೆ ಮಾತಕೊಡುವ ದರ್ದೆನಿತ್ತು
ಮನಸ ಹೇಸಿಗೆ ಮಾಡುವ ದರ್ದೆನಿತ್ತು
ಮಕ್ಳು ಮಾಡುವ ದರ್ದೆನಿತ್ತು
ಸುಖದ ಸಂಗ ಬಿಟ್ಟು ಸುಂಕದ ದರ್ದೆನಿತ್ತು

ದರ್ದೆನಿತ್ತು ದರ್ದೆನಿತ್ತು
ಲಂಚ ಹೇಸಿಗೆ ತಿನ್ನುವ ದರ್ದೆನಿತ್ತು
ಅಖಂಡ ತುಂಡ ಮಾಡುವ ದರ್ದೆನಿತ್ತು
ಹಂಗಿನಲಿ ತಂಗಲು ದರ್ದೆನಿತ್ತು
ತಂಪ ನೆರಳ ತೊರ್ದು ಸುಡು ಬಿಸಲ ದರ್ದೆನಿತ್ತು

ದರ್ದೆನಿತ್ತು ದರ್ದೆನಿತ್ತು
ತಿಂಗಳ ದುಡ್ದು ತಂಗಳ ತಿನ್ನುವ  ದರ್ದೆನಿತ್ತು
 ಹಮಾಲಿ ಬುಟ್ಟು ಹರಾಮಿ ದರ್ದೆನಿತ್ತು
ತಿಂದುಂಡು ತೇಗಿದರು ಆಸೆಯ ದರ್ದೆನಿತ್ತು
ಸುಮ್ಮನಿರುವುದ ಬುಟ್ಟು ತುರುಕಿಯ ತಿಂಡಿಯ ದರ್ದೆನಿತ್ತು

ದರ್ದೆನಿತ್ತು ದರ್ದೆನಿತ್ತು
ಕಂಡಕಂಡದ್ದ ಕಂಡು ಕಣ್ಣತುಂಬುವ ದರ್ದೆನಿತ್ತು 
ಕೇಳಬಾರದ ಕೇಳಿ ಕಿವಿ ಮುಚ್ಚುವ ದರ್ದೆನಿತ್ತು
ಮಾಡಬಾರದ ಮಾಡಿ ಮರೆಸಿಕೊಳ್ಳುವ ದರ್ದೆನಿತ್ತು
ಕಂಡು,ಕೇಳಿ, ಮಾಡಿ ಮರ ಮರ ಮರಗುವ ದರ್ದೆನಿತ್ತು.


_ಸಂತೋಷ ಪತ್ತಾರ

©callmeShravan

ದರ್ದೆನಿತ್ತು ದರ್ದೆನಿತ್ತು ಮಾತಿಗೆ ಮಾತಕೊಡುವ ದರ್ದೆನಿತ್ತು ಮನಸ ಹೇಸಿಗೆ ಮಾಡುವ ದರ್ದೆನಿತ್ತು ಮಕ್ಳು ಮಾಡುವ ದರ್ದೆನಿತ್ತು ಸುಖದ ಸಂಗ ಬಿಟ್ಟು ಸುಂಕದ ದರ್ದೆನಿತ್ತು ದರ್ದೆನಿತ್ತು ದರ್ದೆನಿತ್ತು ಲಂಚ ಹೇಸಿಗೆ ತಿನ್ನುವ ದರ್ದೆನಿತ್ತು ಅಖಂಡ ತುಂಡ ಮಾಡುವ ದರ್ದೆನಿತ್ತು ಹಂಗಿನಲಿ ತಂಗಲು ದರ್ದೆನಿತ್ತು ತಂಪ ನೆರಳ ತೊರ್ದು ಸುಡು ಬಿಸಲ ದರ್ದೆನಿತ್ತು ದರ್ದೆನಿತ್ತು ದರ್ದೆನಿತ್ತು ತಿಂಗಳ ದುಡ್ದು ತಂಗಳ ತಿನ್ನುವ ದರ್ದೆನಿತ್ತು ಹಮಾಲಿ ಬುಟ್ಟು ಹರಾಮಿ ದರ್ದೆನಿತ್ತು ತಿಂದುಂಡು ತೇಗಿದರು ಆಸೆಯ ದರ್ದೆನಿತ್ತು ಸುಮ್ಮನಿರುವುದ ಬುಟ್ಟು ತುರುಕಿಯ ತಿಂಡಿಯ ದರ್ದೆನಿತ್ತು ದರ್ದೆನಿತ್ತು ದರ್ದೆನಿತ್ತು ಕಂಡಕಂಡದ್ದ ಕಂಡು ಕಣ್ಣತುಂಬುವ ದರ್ದೆನಿತ್ತು ಕೇಳಬಾರದ ಕೇಳಿ ಕಿವಿ ಮುಚ್ಚುವ ದರ್ದೆನಿತ್ತು ಮಾಡಬಾರದ ಮಾಡಿ ಮರೆಸಿಕೊಳ್ಳುವ ದರ್ದೆನಿತ್ತು ಕಂಡು,ಕೇಳಿ, ಮಾಡಿ ಮರ ಮರ ಮರಗುವ ದರ್ದೆನಿತ್ತು. _ಸಂತೋಷ ಪತ್ತಾರ ©callmeShravan

99 View

ಅಷ್ಟು ನಿರಂತರವಾಗಿ ಪ್ರೀತಿಸಿದ ನಮ್ಮಿಬ್ಬರ ನಡುವೆ ಯಾಕಿಷ್ಟು ನಿರ್ವಾತ ಪ್ರೀತಿಸಿ ಹೊರಟು ಹೋಗಲು ಯಾಕಿಷ್ಟು ಧಾವಂತ ©callmeShravan

#BreakUp  ಅಷ್ಟು ನಿರಂತರವಾಗಿ ಪ್ರೀತಿಸಿದ ನಮ್ಮಿಬ್ಬರ ನಡುವೆ ಯಾಕಿಷ್ಟು ನಿರ್ವಾತ
ಪ್ರೀತಿಸಿ ಹೊರಟು ಹೋಗಲು ಯಾಕಿಷ್ಟು ಧಾವಂತ

©callmeShravan

#BreakUp

3 Love

 ಹೂ ಮುಡಿದ ನಿನ್ನ ಹೆರಳು ಕೊಡೆಯ ಮರೆಯಲಿ ಮರುಗುತಿದೆ ಹುಡುಗೀ!

ನಾನಾದರು ಏನು ಮಾಡಲಿ ನೀನೆ ಹೇಳು? ನನಗಂತು ಈ ಮಳೆಗೆ ಸಾಕಾಗಿ ಹೋಗಿದೆ
ಸರಿಯಾಗಿ ನಿನ್ನ ಮುಖ ನೋಡಿ ಎಷ್ಟು ಹೊತ್ತಾಯಿತೊ? 
ಎಷ್ಟು ದುಬಾರಿ ಆಯ್ತು ಹುಡುಗ  ನಿನ್ನ ಸಕ್ಕರೆಯಂಥ ನಗು 

ನೀನು ನೋಡಿದರೆ ಮಳೆಗೆ ನೆನೆದು ಹೊರಗೆ, ಬಳಿಗೆ ಬರಬೇಡವೆನ್ನುತ್ತೀ
ಹಾಗೋದಿಲ್ಲ ಕಣೋ, ಒಂದೇಕೆ ಎರಡು ಮುತ್ತು ಕೊಡು
ಎರಡೆರಡು ಕೊಡು
ನಾನೂ ಕೊಡುವುದು ಬಾಕಿ ಇದೆ ಗೊತ್ತಾ?

ಮತ್ತೇನು ಮಾತಾಡಬೇಡ, ಸುಮ್ಮನೆ ಕಾಯ್ತಾ ಇರು
ಬಾಗಿಲು ತೆರೆದು- ಮನಸಿನದು,ಮನೆಯದು.

©callmeShravan

#Love

286 View

#raindrops #love❤ #yq  ಸುರಿವ  ಜಿಟಿ  ಜಿಟಿ  ಮಳೆಗೆ  ನೆನೆದು  ಬಳಿಗೆ  ಬರದಿರೆ
ಹಾಗೆ  ಸುಮ್ಮನೆ  ಹೇಗಿರಲಿ-
ಒಂದು  ಬಿಸಿ  ಮುತ್ತೂ  ಕೊಡದೆ.

©callmeShravan
Trending Topic